ಸೋಮವಾರ, ಸೆಪ್ಟೆಂಬರ್ 28, 2015
ಸರ್ವಜ್ಞನ ವಚನಗಳು 166-168
166. ಮಾತುಬಲ್ಲಾತಂಗೆ | ಯೇತವದು ಸುರಿದಂತೆ |
ಮಾತಾಡಲರಿಯದಾತರಿಗೆ ಬರಿಯೇ ತ |
ನೇತಾಡಿದಂತೆ ಸರ್ವಜ್ಞ ||
ಅರ್ಥ: ಮಾತು ಬಲ್ಲವನಿಗೆ ಕಪ್ಪಲಿಯ ನೀರು ಸುರಿದಂತೆ.ಆದರೆ ಮಾತನಾಡಲು ಅರಿಯದವನಿಗೆ ಬರಿಯ ಕಪ್ಪಲಿಯು ಜೋತು ಬಿದ್ದಂತೆಯೇ ಸರಿ.
167. ಮಾತು ಬಲ್ಲಹ ತಾನು | ಸೋತು ಹೋಹುದು ಲೇಸು |
ಮಾತಿಂಗೆ ಮಾತು ಮಥಿಸಲ್ಕೆ, ವಿಧಿ ಬಂದು |
ಆತುಕೊಂಡಿಹುದು ಸರ್ವಜ್ಞ ||
ಅರ್ಥ: ಮಾತು ಬಲ್ಲಂಥವನು (ಪ್ರಸಂಗ ಬಂದಾಗ) ಸೋತು ಹೋಗುವುದೇ ಒಳ್ಳೆಯದು. (ಇಲ್ಲದಿದ್ದರೆ) ಮಾತಿಗೆ ಮಾತು ಬೆಳೆಯಲು ವಿರಸ ಉಂಟಾಗುತ್ತದೆ. ಇಂಥ ಸಮಯವನ್ನೇ ಕಾಯುತ್ತ ವಿಧಿಯು ಕುಳಿತುಕೊಂಡಿರುತ್ತದೆ.
168. ರಸಿಕನಾಡಿದ ಮಾತು | ಶಶಿಯುದಿಸಿ ಬಂದಂತೆ |
ರಸಿಕನಲ್ಲದನ ಬರಿ ಮಾತು, ಕಿವಿಗೆ ಕೂರ್ |
ದಶಿಯು ಬಡಿದಂತೆ ಸರ್ವಜ್ಞ ||
ಅರ್ಥ: ರಸಿಕನಾಡಿದಂಥ ಮಾತುಗಳು ಚಂದ್ರನುದಯಿಸಿ ಬಂದಷ್ಟು ಸಂತಸವನ್ನೀಯುತ್ತದೆ. ಆದರೆ ರಸಿಕನಲ್ಲದವನ ಮಾತುಗಳಿಂದ ಮಾತ್ರ ಕಿವಿಯಲ್ಲಿ ಚೂಪಾದ ಗೂಟವನ್ನು ಹೊಡೆದಂತಾಗುತ್ತದೆ.
-
34. ಕೊಟ್ಟು ಕುದಿಯಲು ಬೇಡ | ಕೊಟ್ಟಾಡಿ ಕೊಳಬೇಡ | ಕೊಟ್ಟು ನಾ ಕೆಟ್ಟೆನೆನಬೇಡ, ಶಿವನಲ್ಲಿ | ಕಟ್ಟಿಹುದು ಬುತ್ತಿ ಸರ್ವಜ್ಞ || ಅರ್ಥ: ಈ ವಚನವು ಸಹ ಸರ್ವಜ್ಞರ 33ನೆಯ...
-
82. ಅವಯವಗಳೆಲ್ಲರಿಗೆ | ಸಮನಾಗಿ ಇರುತಿರಲು | ಭವಿ, ಭಕ್ತ, ಶ್ವಪಚ, ಶೂದ್ರರಿವರಿಂತೆಂಬ | ಕವನವೆತ್ತಣದು ಸರ್ವಜ್ಜ || ಅರ್ಥ: ಎಲ್ಲರಿಗೂ ಒಂದೇ ರೀತಿಯ ಅವಯವಗಳಿರುತ್ತಿ...
-
154. ಲೆತ್ತವದು ಒಳಿತೆಂದು | ನಿತ್ಯವಾಡಲು ಬೇಡ | ಲೆತ್ತದಿಂ ಕುತ್ತು ಮುತ್ತಿ ಬರೆ, ಸುತ್ತಲೂ | ಕತ್ತಲಾಗಿಹುದು ಸರ್ವಜ್ಞ || ಅರ್ಥ: ಪಗಡೆಯಾಟವು ಒಳ್ಳೆಯದೆಂದು ಪ್ರತಿ...