ಗುರುವಾರ, ಸೆಪ್ಟೆಂಬರ್ 10, 2015

ಸರ್ವಜ್ಞನ ವಚನಗಳು 37-39

37. ಬೀಗರುಂಬುವ ದಿನದಿ | ಯೋಗಿ ಭಿಕ್ಷಕೆ ಬರಲು |
ಬೀಗರಿಗೆ ನೀಡಿ , ಯೋಗಿಗಿಲ್ಲೆಂದವಗೆ |
ಕಾಗೆಯ ಜನುಮ ಸರ್ವಜ್ಞ ||

ಅರ್ಥ: ಬೀಗರಿಗೆ ಮೇಜವಾನಿಯನ್ನು ಮಾಡಿಸಿ,ಊಟಕ್ಕೆ ಕುಳ್ಳಿರಿಸಿದ ಸಮಯದಲ್ಲಿ ಯೋಗಿ(ಜೋಗಿ)ಯೊಬ್ಬನು ಭಿಕ್ಷೆಗೆ ಬರಲು ಆಗ ಅವನಿಗೆ ನಿದ್ದೆ ಬೀಗರಿಗೆ ಉಣಿಸುವಂಥವನಿಗೆ ಕಾಗೆಯ ಜನ್ಮವು ತಪ್ಪದು.

38. ಆಡದಲೆ ಕೊಡುವವನು | ರೂಢಿಯೊಳಗುತ್ತಮನು |
ಆದಿ ಕೊಡುವವನು, ಮಧ್ಯಮನಧಮ ತಾ|
ನಾಡಿ ಕೊಡದವನು ಸರ್ವಜ್ಞ ||

ಅರ್ಥ: ನಾನು ದಾನವನ್ನು ಮಾಡು(ಕೊಡು)ತ್ತೇನೆ ಎಂದು ಬಾಯಿಯಿಂದ ಹೇಳದೆ ಸುಮ್ಮನೇ ಕೊಟ್ಟು ಬಿಡುವಂಥವನು ಉತ್ತಮನು. ಕೊಡುತ್ತೇನೆಂದು ಹೇಳಿ ಕೊಡುವವನು ಮಧ್ಯಮನು. ಕೊಡುತ್ತೇನೆಂದು ಹೇಳಿಯೂ ಕೊಡದಂಥವನು ಅಧಮನು(ನೀಚನು)

39. ಆನೆಯನು ಏರುವಡೆ | ದಾನವನು ಮಾಡುವದು |
ಭಾನುಮಂಡಲವನಡರುವಡೆ, ಹಸಿದವರಿಗೆ |
ನೀನೊಲಿದು ಇಕ್ಕು ಸರ್ವಜ್ಞ ||

ಅರ್ಥ: ಆನೆಯನ್ನೇರಿ ತಿರುಗುವವನಿಗೆ ದಾನ ಕೊಡುವದೆಂದರೆ ಸೂರ್ಯಮಂಡಲವನ್ನೇರಿದಂತೆಯೇ ಸರಿ.(ಅದಕ್ಕಾಗಿ) ನೀನು ಹಸಿದವರಿಗೆ ತಪ್ಪದೇ ನೀಡುವಂಥವನಾಗು.