106. ಹರಳು ಉಂಗುರಲೇಸು | ಹುರುಳಿ ಕುದುರೆಗೆ ಲೇಸು |
ಮರಳ ನೆಲ ತೆಂಗಿಗಿರಲೇಸು, ಸ್ತ್ರೀಯರಿಗೆ |
ಕುರುಳು ಲೇಸೆಂದ ಸರ್ವಜ್ಞ ||
ಅರ್ಥ: ಉಂಗುರಕ್ಕೆ ಹರುಳು ಒಳ್ಳೆಯದು. ಕುದುರೆಗೆ ಹುರುಳಿಯು ಒಳ್ಳೆಯದು. ಉಸುಕಿನ ನೆಲವು ತೆಂಗಿನ ಗಿಡಗಳಿಗೆ ಒಳ್ಳೆಯದು. (ಅದರಂತೆ) ಗುಂಗುರು ಕೂದಲುಗಳು ಸ್ತ್ರೀಯರಿಗೆ ಒಳ್ಳೆಯವು.
107. ಹುತ್ತ ಹಾವಿಗೆ ಲೇಸು | ಮುತ್ತು ಕೊರಳಿಗೆ ಲೇಸು |
ಕತ್ತೆಯ ಹೇರು ತರಲೇಸು, ತುಪ್ಪದ |
ತುತ್ತು ಲೇಸೆಂದ ಸರ್ವಜ್ಞ ||
ಅರ್ಥ: ಹಾವಿಗೆ ಹುತ್ತು ಒಳ್ಳೆಯದು. ಕೊರಳಿಗೆ ಮುತ್ತು ಇದ್ದರೆ ಒಳ್ಳೆಯದು. ಭಾರವನ್ನು ಹೊರಲು ಕತ್ತೆ ಇದ್ದರೆ ಒಳ್ಳೆಯದು. (ಅದರಂತೆ) ತುಪ್ಪದಿಂದ ಕೂಡಿದಂಥ ತುತ್ತು (ಊಟಕ್ಕೆ) ಒಳ್ಳೆಯದು.
108. ಒಸರುವಾ ತೊರೆಳೇಸು | ಹಸನಾದ ಕೆರೆಲೇಸು |
ಪಸರವಿರುವವನ ನೆರೆಲೇಸು, ಸಾಗರವು |
ವಸುಧಿಗೆ ಲೇಸು ಸರ್ವಜ್ಞ ||
ಅರ್ಥ: ಯಾವಾಗಲೂ ಹರಿಯುತ್ತಿರುವ ಹೊಳೆಯು ಒಳ್ಳೆಯದು. ಹಸನಾದ ಕೆರೆಯು ಒಳ್ಳೆಯದು. ಕಂಚುಗಾನ
ನ ನೆರೆ - ಹೊರೆಯರಲ್ಲಿರುವದು ಒಳ್ಳೆಯದು (ಅದರಂತೆ) ಸಮುದ್ರವು ಭೂಮಿಗೆ ಒಳ್ಳೆಯದು.