ಸೋಮವಾರ, ಸೆಪ್ಟೆಂಬರ್ 7, 2015

ಸರ್ವಜ್ಞನ ಪರಿಚಯ

       ಜನಮನದ ಕವಿ ಸರ್ವಜ್ಞ

            ಸರ್ವಜ್ಞದ ಹುಟ್ಟುರು ಅಬ್ಬಲೂರು ಹಾವೇರಿ ಜಿಲ್ಲೆಯ ಒಂದು ಪುಟ್ಟಗ್ರಾಮ. ಅಪಾರ ಜೇವನಾನುಭವದಿಂದ ಬರೆದ ಮೂರು ಪಂಕ್ತಿಗಳ ತ್ರಿಪದಿ ಛಂದಸ್ಸು ಕಾವ್ಯ ಜನಮನದಲ್ಲಿ ಬೇರು ಬಿಟ್ಟಿದೆ.ಸರ್ವಜ್ಞನ ಬದುಕಿನ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲ.

              ಹದಿನಾರು - ಹದಿನೇಳನೇ ಶತಮಾನದ ವಚನಕಾರನೆಂದಷ್ಟೇ ಹೇಳಬಹುದು.ಕನ್ನಡ ಸಾಹಿತ್ಯದಲ್ಲಿ ಸರ್ವಜ್ಞನ ವಚನಗಳು ಬಹಳ ಜನಪ್ರಿಯವಾಗಿದೆ.ಇವರು ತಮ್ಮ ವಚನಗಳಲ್ಲಿ ಸಮಾಜದ ಒಳಿತು ಕೆಡಕುಗಳನ್ನು ಪ್ರಸ್ತಾಪಿಸಿದ್ದಾರೆ.

                  ಇವರು ಒಂದು ಸ್ಥಳದಲ್ಲಿ ನಿಲ್ಲದೆ ಸದಾ ಸಂಚರಿಸುತ್ತಾ ಸಮಾಜದ ಎಲ್ಲಾ ಬಗೆಯ ಅಂಕುಡೊಂಕುಗಳನ್ನು ಒರೆ ಹಚ್ಚಿ ಅದಕ್ಕೊಂದು ಪರಿಹಾರ ಕೊಡುತ್ತಾ ತಮ್ಮ ವಚನಗಳಲ್ಲಿ  ತುಂಬಾ ಸರಳವಾಗಿ ಬಿಡಿಸಿಬಿಟ್ಟಿದ್ದಾರೆ.

                  ಇವರ ವಚನಗಳು ತುಂಬಾ ಸರಳವಾಗಿದ್ದು , ಜನಸಾಮನ್ಯರಿಗೆ ಸುಲಭವಾಗಿ ಅರ್ಥವಾಗುತ್ತದೆ.ಸರ್ವಜ್ಞನ ತ್ರಿಪದಿಗಳು ಜನರ ಬಾಯಲ್ಲಿ ಗಾದೆ ಮಾತುಗಳಾಗಿ ನೆಲೆ ನಿಂತಿದೆ.ಸರ್ವಜ್ಞ ಕನ್ನಡ ನಾಡಿನ ಕವಿಗಳಲ್ಲಿ ಉನ್ನತ ಸ್ಥಾನವನ್ನು ಪಡೆದಿದ್ದಾರೆ. ಧರ್ಮ , ಅರ್ಥ , ಕಾಮ , ಮೋಕ್ಷ ಎಲ್ಲಾ ವಿಷಯಗಳು ಇವರ ತ್ರಿಪದಿಯಲ್ಲಿ ಅಡಕವಾಗಿವೆ.